Wednesday, October 27, 2010

ಅಂಡಮಾನ್ ದ್ವೀಪ ಅಧ್ಭುತ ದ್ವೀಪ !!

ವಿಜಯದಶಮಿ ಕಳೆದ ಮಾರನೆ ದಿನ ಅಂದರೆ ೧೮ ನೆ ಅಕ್ಟೋಬರ್ ೨೦೧೦ ರಿಂದ ೨೪ ನೇ ತಾರೀಖಿನವರೆಗೆ ಅಪ್ಪಾಜಿ, ಅಕ್ಕ, ಸತಯಮೂರ್ತಿ ಮತ್ತು ನಾನು ಅಂಡಮಾನ್ ದ್ವೀಪಗಳಿಗೆ ಹೋಗಿ ಬಂದೆವು. ಪ್ರತಿಯೊಂದು ದ್ವೀಪಕ್ಕೂ ತನ್ನದೇ ಅದ ವಿಶಿಷ್ಟತೆ, ಸೊಬಗು. ನೀಲಿ ಸಮುದ್ರ , ಬಣ್ಣ ಬಣ್ಣದ ಮೀನುಗಳು, ಬಿಳಿಯ ಮರಳು , ದಟ್ಟವಾದ ಕಾಡು, ಮುಗಿಲು ಮುಟ್ಟುವ ಮರಗಳು, ಕೋರಲ್ ಗಳು ಅದೊಂದು ಅಧ್ಭುತ ಪ್ರಪಂಚ ! ಸ್ನೋರ್ಕೆಲಿಂಗ್ ನನಗೆ ಒಂದು ಹೊಸ ಅನುಭವ, ಮರೆಯಲಾಗದ ಅನುಭವ !!

ಹರಟೆ ಕಟ್ಟೆ ಏಕೆ ?

ಹರಟೆ ಕಟ್ಟೆಗೆ ಎಲ್ಲರಿಗೂ ಸ್ವಾಗತ !!

ನಾವೆಲ್ಲರೂ ನಮ್ಮ ಅನಿಸಿಕೆಗಳನ್ನು, ಅನುಭವಗಳನ್ನು, ಅವು ಮುಖ್ಯ ವಿಷಯಗಳಾಗಿರಲಿ ಅಥವಾ ಕ್ಷುಲ್ಲಕ ವಿಷಯಗಳಾಗಿರಲಿ, ಸಂತೋಷದ ಸಂಗತಿಗಳಿರಲಿ, ಬೇಸರದ ಸಂಗತಿಗಳಿರಲಿ - ನಮ್ಮ ನಮ್ಮಲ್ಲಿ ಹಂಚಿಕೊಳ್ಳುವುದಕ್ಕೆ ಇಲ್ಲಿ ಒಂದು ಅವಕಾಶ !
ನಮ್ಮದೇ ಭಾಷೆಯಲ್ಲಿ ಹರಟುವ ಅವಕಾಶ !! ಹಾಗೆಂದು ಇಲ್ಲಿ ಭಾಷೆಯ ಬಂಧನವೇನು ಇಲ್ಲ. ನಿಮಿಗಿಷ್ಟವಾದ ಭಾಷೆಯಲ್ಲಿ ಹರಟಬಹುದು. ಆದರೆ ಅದು ಇತರರಿಗೂ ಅರ್ಥವಗಬೇಕಷ್ಟೇ !
ಮತ್ತೊಮ್ಮೆ ಎಲ್ಲರಿಗೂ ಹರಟೆ ಹೊಡೆಯಲು ಸ್ವಾಗತ